Rangadarshana

Rangadarshana Platform to promote theatre activities in Mysore

ಮಾರ್ಚ್ 14 ಶನಿವಾರ - ಬೆಳಿಗ್ಗೆ 10.30ರಂಗವಲ್ಲಿ ಮೈಸೂರು ಸಂಸ್ಥೆ ಮತ್ತು ಹೊರೈಜಾನ್ ಸ್ಕೂಲ್ ಆಫ್ ಡ್ರಮ್ಸ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ನ...
13/03/2026

ಮಾರ್ಚ್ 14 ಶನಿವಾರ - ಬೆಳಿಗ್ಗೆ 10.30
ರಂಗವಲ್ಲಿ ಮೈಸೂರು ಸಂಸ್ಥೆ ಮತ್ತು ಹೊರೈಜಾನ್ ಸ್ಕೂಲ್ ಆಫ್ ಡ್ರಮ್ಸ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಯೋಗದಲ್ಲಿ ದಿನಾಂಕ:14.03.2026 ರಂದು ಬೆಳಿಗ್ಗೆ 10.30ಕ್ಕೆ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಒಂದು ದಿನದ ‘ಡ್ರಮ್ ಕ್ಲಿನಿಕ್’ – ಲಯವಾದ್ಯ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರವನ್ನು ಹೆಸರಾಂತ ಡ್ರಮ್ ವಾದಕ ಜಿಯೋರಾಜ್ ಜಾರ್ಜ್ ನಡೆಸಿಕೊಡಲಿದ್ದಾರೆ.
ಆಸಕ್ತರು 9620960051, 9061643272 ಸಂಪರ್ಕಿಸಬಹುದು.

ಸಂಜೆ 6.30
ಕಿರುರಂಗಮಂದಿರ ವೇದಿಕೆಯಲ್ಲಿ ಹೊರೈಜಾನ್ ಸ್ಕೂಲ್ ಆಫ್ ಡ್ರಮ್ಸ್ ಸಂಸ್ಥೆಯ ವಿದ್ಯಾರ್ಥಿಗಳು ‘ಡ್ರಮ್ ಜಾಮ್’ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಮಾರ್ಚ್ 15 ಭಾನುವಾರ
ರಂಗವಲ್ಲಿ ಮೈಸೂರು ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಯೋಗದಲ್ಲಿ ದಿನಾಂಕ: 15.03.2026 ರಂದು ಸಂಜೆ 6.30ಕ್ಕೆ `ಪರಮೇಶಿ ಪ್ರೇಮ ಪ್ರಸಂಗ’ ಹಾಸ್ಯ ನಾಟಕವನ್ನು ಪ್ರಸ್ತುತಪಡಿಸಲಿದೆ. ಹೆಸರಾಂತ ರಂಗ ನಿರ್ದೇಶಕ ಶ್ರೀನಿವಾಸ ಪ್ರಭು ಅವರು ರಚಿಸಿರುವ ಈ ನಾಟಕವನ್ನು ರವಿಪ್ರಸಾದ್ ನಿರ್ದೇಶಿಸಿದ್ದಾರೆ.
ಈ ನಾಟಕಕ್ಕೆ ರೂ.100/- ಪ್ರವೇಶಧನ ನಿಗದಿಪಡಿಸಲಾಗಿದೆ.
ಟಿಕೆಟ್‍.ಗಳು bookmyshowನಲ್ಲಿ ಲಭ್ಯವಿದೆ.

🚨 ಮಿಸ್ ಮಾಡ್ಕೋಬೇಡಿ: ನಗು ಮತ್ತು ಕುತೂಹಲದ ರಸದೌತಣಕ್ಕೆ ಸಿದ್ಧರಾಗಿ! 🚨ರಂಗಪ್ರೇಮಿಗಳೇ, ರಂಗವಲ್ಲಿ ಮೈಸೂರು ತಂಡದಿಂದ ಪ್ರದರ್ಶನಗೊಳ್ಳುತ್ತಿರುವ ...
27/01/2026

🚨 ಮಿಸ್ ಮಾಡ್ಕೋಬೇಡಿ: ನಗು ಮತ್ತು ಕುತೂಹಲದ ರಸದೌತಣಕ್ಕೆ ಸಿದ್ಧರಾಗಿ! 🚨
ರಂಗಪ್ರೇಮಿಗಳೇ, ರಂಗವಲ್ಲಿ ಮೈಸೂರು ತಂಡದಿಂದ ಪ್ರದರ್ಶನಗೊಳ್ಳುತ್ತಿರುವ ‘ತಟ್ಟೆ ಇಡ್ಲಿ ರಾದ್ಧಾಂತ’ ಪತ್ತೇದಾರಿ ಹಾಸ್ಯ ನಾಟಕಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ!

ತನಿಖೆಯ ತೀವ್ರತೆ ಮತ್ತು ಹಾಸ್ಯದ ಅಬ್ಬರಕ್ಕೆ ಸಾಕ್ಷಿಯಾಗಲು ಇಂದೇ ಸಿದ್ಧರಾಗಿ.

🗓️ ಸಮಯ ಮತ್ತು ಸ್ಥಳ:
ದಿನಾಂಕ: ಜನವರಿ 28 ಮತ್ತು 29 (ನಾಳೆ ಮತ್ತು ನಾಡಿದ್ದು)

ಸಮಯ: ಸಂಜೆ 7:00ಕ್ಕೆ ಸರಿಯಾಗಿ

ಸ್ಥಳ: ಕಿರುರಂಗಮಂದಿರ, ಕಲಾಮಂದಿರದ ಆವರಣ, ಮೈಸೂರು

🎭 ನಾಟಕದ ವಿಶೇಷತೆಗಳು:
ರಂಗಾಯಣದ ಹಿರಿಯ ಕಲಾವಿದ ಮಾಯಸಂದ್ರ ಕೃಷ್ಣಪ್ರಸಾದ್ ಅವರ ಅದ್ಭುತ ರಚನೆ ಮತ್ತು ನಿರ್ದೇಶನ.

ಕುತೂಹಲ ಕೆರಳಿಸುವ ಪತ್ತೇದಾರಿ ಕಥೆಯ ಜೊತೆಗೆ ಹೊಟ್ಟೆ ಹುಣ್ಣಾಗಿಸುವ ಹಾಸ್ಯ.

ನುರಿತ ತಾಂತ್ರಿಕ ತಂಡದ ರಂಗವಿನ್ಯಾಸ ಮತ್ತು ಹಿನ್ನೆಲೆ ಸಂಗೀತ.

🎟️ ಪ್ರವೇಶ ದರ: ರೂ. 100/- 📞 ಟಿಕೆಟ್‌ಗಳಿಗಾಗಿ ಈಗಲೇ ಸಂಪರ್ಕಿಸಿ: 9964656482
ಸೂಚನೆ: ಸೀಟುಗಳಿಗಾಗಿ ಮುಂಚಿತವಾಗಿಯೇ ಆಗಮಿಸಿ, ನಾಟಕದ ಪೂರ್ಣ ಮಜಾ ಸವಿಯಿರಿ!

ವ್ಯಾಸ್ಪ್ ಥಿಯೇಟರ್ ಅರ್ಪಿಸುವ ಹಾಸ್ಯ ನಾಟಕ "ನೀನಾನಾದ್ರೆ ನಾನೀನೇನಾ""Get ready to laugh out loud! VASP Theatre proudly presents th...
13/12/2025

ವ್ಯಾಸ್ಪ್ ಥಿಯೇಟರ್ ಅರ್ಪಿಸುವ
ಹಾಸ್ಯ ನಾಟಕ "ನೀನಾನಾದ್ರೆ ನಾನೀನೇನಾ"

"Get ready to laugh out loud! VASP Theatre proudly presents the hilarious comedy play
"NEENANADRE NAANEENENA"
Don't miss it!"

📍 Venue: NATANA RANGASHALE
🗓️ Date: Sunday 14th December 2025
⏰ Time: 3:00 PM and 6:30 PM ( 2 Shows)

🎟️ Tickets are available on BookMyShow and Natana Box Office

Book tickets online for NeeNaaNaaDre NaaNeeNeNaa in Mysuru (Mysore) on BookMyShow which is a Kannada comedy play happening at Natana Rangashaale: Mysuru

03/12/2025
ರಶ್ಮಿಯನ್ನು ಒಲಿಸಿಕೊಳ್ಳಲು ಪರದಾಡುವ ಪರಮೇಶಿ.. ಕೃಷ್ಣೋಜಿಯ ಬ್ರಹ್ಮಚರ್ಯಕ್ಕೆ ಸವಾಲೆಸೆಯುತ್ತಿರುವ ಶಾಂತಲಾದೇವಿಯ ಕಣ್ಣುಗಳು.. ಶತಾಯಗತಾಯ ಕವಿಯಾ...
03/12/2025

ರಶ್ಮಿಯನ್ನು ಒಲಿಸಿಕೊಳ್ಳಲು ಪರದಾಡುವ ಪರಮೇಶಿ.. ಕೃಷ್ಣೋಜಿಯ ಬ್ರಹ್ಮಚರ್ಯಕ್ಕೆ ಸವಾಲೆಸೆಯುತ್ತಿರುವ ಶಾಂತಲಾದೇವಿಯ ಕಣ್ಣುಗಳು.. ಶತಾಯಗತಾಯ ಕವಿಯಾಗಲೇ ಬೇಕು ಎಂದು ಹಠ ತೊಟ್ಟಿರುವ ವ್ಯಾಕುಲರಾಯ.. ಗಂಡನನ್ನು ಹುರಿದು ಮುಕ್ಕುವ ಅಂಬಾಬಾಯಿ.. ತನ್ನ ಹೆಸರೇ ನೆನಪಿಲ್ಲದ ಭೂತನಾಥ.. ತಿಂಡಿ ಪೋತ ದೇಸಾಯಿ.. ಒಳ್ಳೆಯವನಾಗಿರುವ ಮಾಜಿ ದರೋಡೆಕೋರ.. ಕಣ್ಣು ಮಿಟುಕಿಸುವುದರೊಳಗೆ ನೆಕ್ಲೆಸ್ ಎಗರಿಸುವ ಚೆನ್ನಿ.. ಇವಿಷ್ಟೂ ಪಾತ್ರಗಳು ಒಂದು ಕಡೆ ಸೇರಿದರೆ ಉಕ್ಕುವ ನಗೆ ಬುಗ್ಗೆಯೇ ‘ಪರಮೇಶಿ ಪ್ರೇಮ ಪ್ರಸಂಗ’

ರಚನೆ: ಶ್ರೀನಿವಾಸ ಪ್ರಭು
ನಿರ್ದೇಶನ: ರವಿಪ್ರಸಾದ್..

ಇದೇ ಡಿಸೆಂಬರ್ 6, ಸಂಜೆ 6.30ಕ್ಕೆ
ಕಿರುರಂಗಮಂದಿರದಲ್ಲಿ.

ತಪ್ಪದೆ ಬರ್ತೀರಲ್ಲ??

ವಾರಾಂತ್ಯಕ್ಕೆ ರಂಗವಲ್ಲಿ ಅರ್ಪಿಸುವ ನಗೆ ನಾಟಕಪರಮೇಶಿ ಪ್ರೇಮಪ್ರಸಂಗ  ರಚನೆ: ಶ್ರೀನಿವಾಸ ಪ್ರಭುನಿರ್ದೇಶನ: ರವಿಪ್ರಸಾದ್ ನವೆಂಬರ್ 23 , ಭಾನುವಾ...
17/11/2025

ವಾರಾಂತ್ಯಕ್ಕೆ ರಂಗವಲ್ಲಿ ಅರ್ಪಿಸುವ ನಗೆ ನಾಟಕ

ಪರಮೇಶಿ ಪ್ರೇಮಪ್ರಸಂಗ
ರಚನೆ: ಶ್ರೀನಿವಾಸ ಪ್ರಭು
ನಿರ್ದೇಶನ: ರವಿಪ್ರಸಾದ್

ನವೆಂಬರ್ 23 , ಭಾನುವಾರ ಮತ್ತು
ಡಿಸೆಂಬರ್ 6 ಶನಿವಾರ ಸಂಜೆ 6.30ಕ್ಕೆ
ಕಿರುರಂಗಮಂದಿರ, ಮೈಸೂರು.

ಮಿಸ್ ಮಾಡ್ದೆ ಬರ್ತೀರಲ್ವಾ?

ಟಿಕೆಟ್.ಗಳು ಬುಕ್ ಮೈ ಶೋ ನಲ್ಲಿ ಲಭ್ಯ.
https://in.bookmyshow.com/plays/parameshi-prema-prasanga/ET00470224

ಸಕಲರಿಗೆ ಲೇಸನ್ನು ಬಯಸುವ ಸರ್ವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
20/10/2025

ಸಕಲರಿಗೆ ಲೇಸನ್ನು ಬಯಸುವ ಸರ್ವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ರಂಗವಲ್ಲಿ ನಿಮಗಾಗಿ ಪ್ರಸ್ತುತಪಡಿಸುತ್ತಿದೆಶ್ರೀನಿವಾಸ ಪ್ರಭು ರಚನೆಯ ಜನಪ್ರಿಯ ಹಾಸ್ಯನಾಟಕಪರಮೇಶಿ ಪ್ರೇಮಪ್ರಸಂಗಆಗಸ್ಟ್ 23 ಮತ್ತು 24 | ಸಂಜೆ 6...
19/08/2025

ರಂಗವಲ್ಲಿ ನಿಮಗಾಗಿ ಪ್ರಸ್ತುತಪಡಿಸುತ್ತಿದೆ
ಶ್ರೀನಿವಾಸ ಪ್ರಭು ರಚನೆಯ ಜನಪ್ರಿಯ ಹಾಸ್ಯನಾಟಕ
ಪರಮೇಶಿ ಪ್ರೇಮಪ್ರಸಂಗ

ಆಗಸ್ಟ್ 23 ಮತ್ತು 24 | ಸಂಜೆ 6.30ಕ್ಕೆ
ಸ್ಥಳ: ಕಿರುರಂಗಮಂದಿರ, ಮೈಸೂರು.

Book tickets online for Parameshi Prema Prasanga in Mysuru (Mysore) on BookMyShow which is a Kannada comedy play happening at Kiru Ranga Mandira: Mysuru

ಕನ್ನಡ ಪರ ಹೋರಾಟಗಾರ, ಮೈಸೂರಿನ ನೃಪತುಂಗ ಕನ್ನಡ ಶಾಲೆಯ ಸ್ಥಾಪಕರಲ್ಲೊಬ್ಬರಾದ ಸ.ರ. ಸುದರ್ಶನ್ ಇನ್ನಿಲ್ಲ.ಸ.ರ. ಸುದರ್ಶನ ಇಂದು ಬೆಳಿಗ್ಗೆ ಹೃದಯಾ...
17/08/2025

ಕನ್ನಡ ಪರ ಹೋರಾಟಗಾರ, ಮೈಸೂರಿನ ನೃಪತುಂಗ ಕನ್ನಡ ಶಾಲೆಯ ಸ್ಥಾಪಕರಲ್ಲೊಬ್ಬರಾದ ಸ.ರ. ಸುದರ್ಶನ್ ಇನ್ನಿಲ್ಲ.

ಸ.ರ. ಸುದರ್ಶನ ಇಂದು ಬೆಳಿಗ್ಗೆ ಹೃದಯಾಘಾತದಿಂದ ಮೈಸೂರಿನಲ್ಲಿನಿಧನರಾದರು.
ಇವರು ರಂಗ ಕಲಾವಿದೆ ನುಡಿ ಸುದರ್ಶನ್ ಅವರ ತಂದೆ. ಐವತ್ತು ವರ್ಷಗಳ ಹಿಂದೆಯೇ ಮೊದಲ ಬಾರಿಗೆ ಕನ್ನಡ ಚಳವಳಿಯಲ್ಲಿ ಸುದರ್ಶನ್ ಪಾಲ್ಗೊಳ್ಳುವಿಕೆ. ಅಂದಿನಿಂದ ಇಂದಿನವರೆಗೆ ಸತತವಾಗಿ ಕನ್ನಡ ಚಳವಳಿಯಲ್ಲಿ ಭಾಗಿ. 80ರ ದಶಕದಲ್ಲಿ ಪ್ರಾರಂಭವಾದ ಗೋಕಾಕ್ ಚಳವಳಿಯಲ್ಲಿ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಆರಂಭದಿಂದಲೂ ಭಾಗಿ. ಮೂರು ದಿನಗಳ ಬಂಧನ. ಕನ್ನಡ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಅಂದು ಆಯ್ಕೆ, ಇಂದಿನವರೆಗೂ ಮುಂದುವರಿಕೆ.
ಸರಕಾರದ ವತಿಯಿಂದ ಕನ್ನಡಕ್ಕೆ ಕುತ್ತು ಬಂದ ಬಹುತೇಕ ಸಂದರ್ಭಗಳಲ್ಲಿ ಹೋರಾಟ. ಹಲವಾರು ಧರಣಿಗಳು, ಪ್ರತಿಭಟನೆಗಳು ಮತ್ತಿತರ ವಿಧಾನಗಳು. ಹಲವು ಬಾರಿ ಬಂಧನ, ಬಿಡುಗಡೆ.
ವಿದ್ಯಾರ್ಥಿ ದಿಸೆಯಲ್ಲಿದ್ದಾಗಲೇ ಗೆಳೆಯರು ಆರಂಭಿಸಿದ ಚೇತನ ಕನ್ನಡ ಸಂಘದ ಕಾರ್ಯದರ್ಶಿ. ಒಂದು ದಶಕಗಳಿಗೂ ಹೆಚ್ಚು ಕಾಲ ವಿಶಿಷ್ಟವಾದ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಎಪ್ಪತ್ತರ ದಶಕದಲ್ಲಿ ಮೈಸೂರಿನಲ್ಲಿ ಮನೆ ಮಾತಾಗಿದ್ದ ಸಂಘ. ನಾಟಕ, ಚಳವಳಿ, ಪುಸ್ತಕ ಯಾತ್ರೆ, ಸಮೀಕ್ಷೆಗಳಂತಹ ಕಾರ್ಯಕ್ರಮಗಳ ಮೂಲಕ ಹೊಸ ಛಾಪನ್ನು ಮೂಡಿಸಿದ ಸಂಘ.
ಮೈಸೂರು ವಿಶ್ವವಿದ್ಯಾನಿಲಯದ ಭೂ ವಿಜ್ಞಾನ ಸ್ನಾತಕೋತ್ತರ ಪದವಿ (ಎಂ ಎಸ್ ಸಿ ಭೂವಿಜ್ಞಾನ) ಪಡೆದ ಅವರು, ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರೂ ಪರೀಕ್ಷೆಯಲ್ಲಿ ಕನ್ನಡದಲ್ಲಿ ಉತ್ತರಿಸಿ ಮೂರನೇ ರ್ಯಾಂಕ್ ಪಡೆದರು.
40 ವರ್ಷಗಳ ಹಿಂದೆಯೇ ಪ್ರಸಿದ್ಧ ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರ ಜೊತೆಗೂಡಿ ಪದವಿಮಟ್ಟದ ವಿದ್ಯಾರ್ಥಿಗಳಿಗಾಗಿ 'ಬದಲಾಗುತ್ತಿರುವ ಭೂಮಿ` ಎಂಬ ಪುಸ್ತಕ ಪ್ರಕಟಣೆ. ಪ್ರಸಿದ್ಧ ಭೂ ವಿಜ್ಞಾನ ಲೇಖಕರು ಹಾಗೂ ಪ್ರಾಧ್ಯಾಪಕರು ಆಗಿದ್ದ ದಿವಂಗತ ಡಾ. ಬಿ. ವಿ. ಗೋವಿಂದರಾಜುಲು ಅವರೊಂದಿಗೆ ಅನುವಾದಿಸಿದ "ಭೂ ಸ್ವರೂಪ ವಿಜ್ಞಾನ' ಎಂಬ ಸ್ನಾತಕೋತ್ತರ ಮಟ್ಟದ ಕೃತಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಿಂದ ಪ್ರಕಟಣೆ. ಪ್ರಸ್ತುತ 'ಭೂ ವಿಜ್ಞಾನ ವಿಷಯ ವಿಶ್ವಕೋಶ'ದ ಗೌರವ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಎಲ್ಎಲ್ಬಿ ಪರೀಕ್ಷೆಯಲ್ಲೂ ಕನ್ನಡದಲ್ಲಿ ಉತ್ತರಿಸಿದವರು. ಅವರು ಸಂಕಲಿಸಿದ 'ಕಾನೂನು ಪದಕೋಶ' ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದಿಂದ ಪ್ರಕಟವಾಗಿದೆ.
ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಯೋಜನೆ ಅಡಿಯಲ್ಲಿ ಗೌರವ ಸಂಪಾದಕರಾಗಿ ನಾಲ್ಕು ಸಂಪುಟಗಳ ಇಂಗ್ಲಿಷ್ ಕನ್ನಡ ನಿಘಂಟನ್ನು ಸಂಕ್ಷಿಪ್ತಗೊಳಿಸಿ, ೨೫೦೦೦ ಪದಗಳಿರುವ ' ಸಂಕ್ಷಿಪ್ತ ಇಂಗ್ಲಿಷ್ ಕನ್ನಡ ನಿಘಂಟು' ಸಿದ್ಧಪಡಿಸಿದ್ದು, ಅಚ್ಚಿನಲ್ಲಿದೆ.
ಪ್ರಾರಂಭದಲ್ಲಿ ಸ್ವತಃ ಪ್ರಕಟಿಸಿದ 'ಶಾಲಾ ವಿದ್ಯಾರ್ಥಿಗಳಿಗಾಗಿ ಇಂಗ್ಲೀಷ್ ಕನ್ನಡ ನಿಘಂಟು' ನಂತರ ವಿವಿಧ ಪ್ರಕಾಶಕರಿಂದ ೧೫ನೇ ಮುದ್ರಣವನ್ನು ಕಂಡಿದೆ.
ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಇಂಗ್ಲಿಷ್ ಕನ್ನಡ ನಿಘಂಟಿನ ಸಹಾಯಕ ಸಂಪಾದಕನಾಗಿ ಮೊದಲ ನೇಮಕ. 14 ವರ್ಷಗಳ ಅನುಭವ. ನಂತರ ಅದೇ ಪ್ರಸಾರಾಂಗದಲ್ಲಿ ಸಹಾಯಕ ನಿರ್ದೇಶಕನಾಗಿ ಬಡ್ತಿ. ಉಪನಿರ್ದೇಶಕನಾಗಿ 2014ರಲ್ಲಿ ನಿವೃತ್ತಿ.
ಮೈಸೂರಿನ ಅರಸರು ಸ್ಥಾಪಿಸಿದ, ಕನ್ನಡ ನಾಡಿನ ಮೊಟ್ಟ ಮೊದಲ ಸರಕಾರಿ ಬಾಲಕಿಯರ ಶಾಲೆಯಾದ ಮಹಾರಾಣಿ ಮಾದರಿ ಶಾಲೆಯ ಜಾಗವನ್ನು ರಾಮಕೃಷ್ಣ ಆಶ್ರಮದವರು ವಿವೇಕಾನಂದ ಸ್ಮಾರಕಕ್ಕಾಗಿ ಸರ್ಕಾರದಿಂದ ಪಡೆದುಕೊಂಡಾಗ ಶಾಲೆಯನ್ನು ಉಳಿಸಲು ಸುಮಾರು ಒಂದು ದಶಕಗಳ ಕಾಲ ನಡೆದ ಹೋರಾಟದ ಮುಂಚೂಣಿಯಲ್ಲಿ ಭಾಗಿ. ಹಲವು ಸಾರಿ ಪ್ರತಿಭಟನೆ, ಬಂಧನ, ಬಿಡುಗಡೆ.
ಗೋಕಾಕ್ ಚಳವಳಿಯ ನಂತರ ಕನ್ನಡಕ್ಕಾಗಿ ಒಂದು ಸೃಜನಾತ್ಮಕ ಕಾರ್ಯವನ್ನು ಕೈಗೊಳ್ಳಬೇಕೆಂಬ ಹಿರಿಯರು ಮತ್ತು ಗೆಳೆಯರ ಆಶಯದಂತೆ ಸ್ಥಾಪಿತವಾದ ನೃಪತುಂಗ ಕನ್ನಡ ಶಾಲೆಯ ಸ್ಥಾಪಕ ಧರ್ಮದರ್ಶಿಗಳಲ್ಲೊಬ್ಬರು.

ನೃಪತುಂಗ ಕನ್ನಡ ಶಾಲೆ ಮೈಸೂರಿನ ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ 1991ರಲ್ಲಿ ಪ್ರಾರಂಭವಾದ ಶಾಲೆ. ಸಂಪೂರ್ಣ ಕನ್ನಡ ಮಾಧ್ಯಮ ಶಾಲೆ. ಪ್ರತಿ ವರ್ಷ ಸರ್ಕಾರಿ ಶಾಲೆಗಳಲ್ಲಿ ಹತ್ತಿಪ್ಪತ್ತು ಮಕ್ಕಳು ಕಡಿಮೆಯಾಗುತ್ತಿದ್ದರೆ, ಸದರಿ ಶಾಲೆಯಲ್ಲಿ ಹತ್ತಿಪ್ಪತ್ತು ಮಕ್ಕಳು ಹೆಚ್ಚಾಗುತ್ತಿದ್ದಾರೆ. ಸ್ವಂತ ಕಟ್ಟಡ, ತನ್ನದೇ ಆದ ರಂಗ ಮಂದಿರ ಹೊಂದಿದೆ. ಸುಮಾರು ಎರಡು ದಶಕಗಳಿಂದ ಇದೇ ಸಂಸ್ಥೆಯ ಕಾರ್ಯದರ್ಶಿ, ಪ್ರಸ್ತುತ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಈವರೆಗೆ ನವ ಸಾಕ್ಷರರು ಹಾಗೂ ಮಕ್ಕಳಿಗಾಗಿ ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.
ಮೂರು ವರ್ಷಗಳ ಕಾಲ ರಾಜ್ಯ ಸರ್ಕಾರದ ಕರ್ನಾಟಕ ವಿಜ್ಞಾನ ಅಕಾಡೆಮಿಯಲ್ಲಿ ಸದಸ್ಯನಾಗಿ ಕಾರ್ಯ ನಿರ್ವಹಣೆ. ಅಕಾಡೆಮಿ ವತಿಯಿಂದ ಪ್ರತಿ ವರ್ಷ ಕನ್ನಡ ವಿಜ್ಞಾನ ಸಮ್ಮೇಳನ ಮತ್ತು ಕನ್ನಡದಲ್ಲಿ ವಿಜ್ಞಾನ ಸಾಹಿತ್ಯವನ್ನು ಬದುಕಾಗಿ ಅಳವಡಿಸಿಕೊಂಡು ಲೇಖನ ಕೃಷಿ ಮಾಡಿದ ವಿಜ್ಞಾನ ಲೇಖಕರಿಗೆ ಜೀವಮಾನ ಸಾಧನೆ ಪ್ರಶಸ್ತಿ, ಇಂಗ್ಲಿಷ್ ಕನ್ನಡ ವಿಜ್ಞಾನ ನಿಘಂಟು ಮೊದಲಾದವುಗಳ ಪ್ರಸ್ತಾವನೆ ಮಂಡಿಸಿ, ಪ್ರೇರಕನ ಪಾತ್ರ ನಿರ್ವಹಣೆ.
ಗೋಕಾಕ್ ಚಳವಳಿ ಕುರಿತು ಬರೆದಿರುವ ಪುಸ್ತಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಣೆ.

***
ಕನ್ನಡಕ್ಕೆ ಶಾಸ್ತ್ರೀಯ ಭಾಷೆ ನೀಡಬೇಕೆಂಬ ಹೋರಾಟದಲ್ಲಿ ಪ್ರತ್ಯಕ್ಷವಾಗಿ ಅವರು ಭಾಗಿ. ಅದನ್ನು ಮೈಸೂರಿನಲ್ಲಿ ಉಳಿಸಬೇಕೆಂದು ನಡೆಯುತ್ತಿರುವ ಆಂದೋಲನದಲ್ಲಿ ಮುಂದಾಳತ್ವ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ರಚಿತವಾಗಿದ್ದ ಜಿಲ್ಲಾ ಕನ್ನಡ ಕಾವಲು ಸಮಿತಿ ಸದಸ್ಯತ್ವ.

ಸಮಿತಿ ಸರಿಯಾಗಿ ಕಾರ್ಯ ನಡೆಸಲಿಲ್ಲವೆಂದು ಪ್ರತಿಭಟಿಸಿ ರಾಜೀನಾಮೆ. ಅಧಿಕಾರಿಗಳ ಮನವಿಯ ಮೇರೆಗೆ ರಾಜೀನಾಮೆಯನ್ನು ಹಿಂದಕ್ಕೆ ತೆಗೆದುಕೊಂಡು ನಂತರ ಹಲವಾರು ಕಚೇರಿಗಳಿಗೆ ಸಮಿತಿಯ ಸದಸ್ಯರೊಡನೆ ಭೇಟಿ, ತಪಾಸಣೆ.

ಮೈಸೂರಿನಲ್ಲಿ ದಶಕಗಳಿಂದ ನಡೆಯುತ್ತಿರುವ ಕನ್ನಡ ನಾಮಫಲಕ ಚಳವಳಿಯಲ್ಲಿ ಮುಂದಾಳತ್ವ.

ಒಂದು ದಶಕದ ಹಿಂದೆ ರಾಜ್ಯದಲ್ಲಿ ಒಂದರಿಂದ ಏಳನೇ ತರಗತಿವರೆಗೆ ಮಾತೃಭಾಷೆ ಶಿಕ್ಷಣ ಮಾಧ್ಯಮವಾಗಬೇಕೆಂದು ಉಚ್ಚ ನ್ಯಾಯಾಲಯದಲ್ಲಿ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಪ್ರಧಾನ ಕಾರ್ಯದರ್ಶಿಯಾಗಿ ಅರ್ಜಿದಾರನಾಗಿ ರಿಟ್ ಆಫ್ ಮ್ಯಾಂಡಮಸ್ ಸಲ್ಲಿಕೆ.

ಶಿಕ್ಷಣ ಮಾಧ್ಯಮದ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದ ದಾವೆಯಲ್ಲಿ ಮಧ್ಯಪ್ರವೇಶ ಅರ್ಜಿದಾರರಲ್ಲೊಬ್ಬರು.

ಲೇಖನ ಸೌಜನ್ಯ: ಗಣೇಶ್ ಅಮೀನಗಢ

Acting Workshop at MYSURUACTING is Business. Because you are busy learning to ACT by paying for it. And then you earn mo...
31/07/2025

Acting Workshop at MYSURU

ACTING is Business. Because you are busy learning to ACT by paying for it. And then you earn money by ACTING.

This is the only profession where you live many lives.

Join our 10 DAYS Acting Workshop starting from 4th August 2025 at MYSURU.

➡️ It's a 10 Day Acting Workshop
➡️ From 4 August to 15 August 2025
➡️ 6:30 AM - 9:30 AM
➡️ Weekends OFF
➡️ At Rehearsal hall, Kalamandira premises, Mysuru
➡️ Register: www.rangaratha.com/form-1
➡️ Call: 8050157443 / 9448276776
➡️ ADMISSIONS ARE CLOSING SOON

Shwetha Shrinivas
Deepak Mysuru

ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ (ರಿ) ವತಿಯಿಂದ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು. ಇವರು ನೀಡಿರುವ ಪ್ರಶಸ್ತಿಗಳು ಮಲತಾಯಿ ಧೋರಣ...
29/07/2025

ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ (ರಿ) ವತಿಯಿಂದ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು. ಇವರು ನೀಡಿರುವ ಪ್ರಶಸ್ತಿಗಳು ಮಲತಾಯಿ ಧೋರಣೆಯಿಂದ ಕೂಡಿದ್ದು, ಅಧ್ಯಕ್ಷರು ಸರ್ವಾಧಿಕಾರಿ ಧೋರಣೆಯಿಂದ ನಡೆದುಕೊಳ್ಳುತ್ತಿರುವುದನ್ನು ತೀವ್ರವಾಗಿ ಖಂಡಿಸಿ, ಖಂಡನಾ ನಿರ್ಣಯವನ್ನು ಕೈಗೊಂಡು ಪತ್ರಿಕಾಗೋಷ್ಟಿ ನಡೆಸಲಾಯಿತು.

ಸವಿನಯ ಆಮಂತ್ರಣಆತ್ಮೀಯರೇ..ಮೈಸೂರು ರಂಗಾಯಣ ಆಯೋಜಿಸಿರುವ 'ಗ್ರೀಷ್ಮ ರಂಗೋತ್ಸವ' ದ ಅಂಗವಾಗಿ ಜುಲೈ 20ರ ಭಾನುವಾರದಂದು ಸಂಜೆ 6.30ಕ್ಕೆ  `ಭೂಮಿಗೀ...
17/07/2025

ಸವಿನಯ ಆಮಂತ್ರಣ

ಆತ್ಮೀಯರೇ..
ಮೈಸೂರು ರಂಗಾಯಣ ಆಯೋಜಿಸಿರುವ 'ಗ್ರೀಷ್ಮ ರಂಗೋತ್ಸವ' ದ ಅಂಗವಾಗಿ ಜುಲೈ 20ರ ಭಾನುವಾರದಂದು ಸಂಜೆ 6.30ಕ್ಕೆ `ಭೂಮಿಗೀತ’ ರಂಗಮಂದಿರದಲ್ಲಿ ಹೆಸರಾಂತ ನಾಟಕಕಾರ, ನಿರ್ದೇಶಕ, ಚಲನಚಿತ್ರ ನಟ ಶ್ರೀನಿವಾಸ ಪ್ರಭು ಅವರ ರಚನೆಯ 'ಪರಮೇಶಿ ಪ್ರೇಮಪ್ರಸಂಗ' ಎಂಬ ಹಾಸ್ಯ ಪ್ರಹಸನವನ್ನು ಪ್ರಸ್ತುತಪಡಿಸುತ್ತಿದ್ದೇವೆ. ಅಂದು ತಾವು ಬಿಡುವು ಮಾಡಿಕೊಂಡು ಕುಟುಂಬ ಸಮೇತರಾಗಿ ಬಂದು ನಾಟಕವನ್ನು ವೀಕ್ಷಿಸಿ ತಮ್ಮ ಮನಸ್ಸಂತೋಷಗೊಳಿಸಿಕೊಳ್ಳಬೇಕಾಗಿ ವಿನಂತಿ.
ಇಂತಿ ತಮ್ಮ ಆಗಮನಾಭಿಲಾಷಿಗಳು
ರಂಗವಲ್ಲಿ
ಮೈಸೂರು

Address

Mysore
Mysore

Telephone

+919964656482

Website

Alerts

Be the first to know and let us send you an email when Rangadarshana posts news and promotions. Your email address will not be used for any other purpose, and you can unsubscribe at any time.

Share

Category