ಅರೆಭಾಷೆ ಚಿತ್ರರಂಗ Arebashe film industry

ಅರೆಭಾಷೆ ಚಿತ್ರರಂಗ Arebashe film industry Contact information, map and directions, contact form, opening hours, services, ratings, photos, videos and announcements from ಅರೆಭಾಷೆ ಚಿತ್ರರಂಗ Arebashe film industry, Sullia D K.

*ಅಮರ ಸುಳ್ಯ - 1837 ಚಲನಚಿತ್ರಕ್ಕೆ ಮುಹೂರ್ತ ಮತ್ತು ಪೋಸ್ಟರ್ ಬಿಡುಗಡೆ*
18/07/2022

*ಅಮರ ಸುಳ್ಯ - 1837 ಚಲನಚಿತ್ರಕ್ಕೆ ಮುಹೂರ್ತ ಮತ್ತು ಪೋಸ್ಟರ್ ಬಿಡುಗಡೆ*

  ಕಲಾಮಾಯೆ(ರಿ ) ಏನೆಕಲ್ ಫಿಲ್ಮ್ ಸಂಸ್ಥೆಯ ಸಾರಥ್ಯದಲ್ಲಿ ವಿದ್ಯಾಧರ ಕುಡೆಕಲ್ಲು ಇವರ ಅಮರ ಸುಳ್ಯ -1837 ಬ್ರಿಟಿಷ್ ವಸಾಹಾತುಶಾಹಿ ವಿರುದ್...

✍️ಕೆ.ಆರ್. ತೇಜಕುಮಾರ್  ಬಡ್ಡಡ್ಕ       ದಿನಾಂಕ ಜುಲೈ 15 ಶುಕ್ರವಾರ ಸಂಜೆ ಒಂದು ಅಪೂರ್ವ ಘಟನೆಗೆ ಸಾಕ್ಷಿಯಾದೆ. ಕಲಾಮಾಯೆ ತಂಡದ ಸುಧೀರ್ ಏನೆಕಲ...
17/07/2022

✍️ಕೆ.ಆರ್. ತೇಜಕುಮಾರ್ ಬಡ್ಡಡ್ಕ

ದಿನಾಂಕ ಜುಲೈ 15 ಶುಕ್ರವಾರ ಸಂಜೆ ಒಂದು ಅಪೂರ್ವ ಘಟನೆಗೆ ಸಾಕ್ಷಿಯಾದೆ. ಕಲಾಮಾಯೆ ತಂಡದ ಸುಧೀರ್ ಏನೆಕಲ್ಲುರವರ ಹೊಸ ಚಲನಚಿತ್ರವೊಂದರ ಪ್ರಾರಂಭಿಕ ಪೂಜೆ ಹಾಗೂ ಪೋಸ್ಟರ್ ಬಿಡುಗಡೆ. ಅಮರಸುಳ್ಯದ 1837 ರ ಬ್ರಿಟಿಷ್ ವಿರುದ್ಧ ಹೋರಾಟದ ಐತಿಹಾಸಿಕ ಘಟನೆಯನ್ನು ಸಿನೆಮಾವಾಗಿ ಇಳಿಸುವ ಒಂದು ಪ್ರಾಮಾಣಿಕ ಪ್ರಯತ್ನಕ್ಕೆ ಹೊರಟಿದ್ದಾರೆ. ಮೊದಲಾಗಿ ಅವರಿಗೆ ಶುಭಹಾರೈಕೆಗಳು.
ಕೆ ಆರ್ ವಿದ್ಯಾಧರ ಅವರ ಸಂಶೋಧನಾ ಕೃತಿ "ಅಮರಸುಳ್ಯ1837 ಬ್ರಿಟಿಶ್ ವಸಾಹತುಶಾಯಿ ವಿರುದ್ಧ ಸಶಸ್ತ್ರ ಹೋರಾಟ" ಎಂಬ ಕೃತಿಯಾಧಾರಿತ ಅರೆಭಾಷೆ/ಕನ್ನಡ ಚಿತ್ರ. ಸುಳ್ಯ , ಮಡಿಕೇರಿ ಕಡೆಯಲ್ಲಿನ ಅಪಾರ ಜನರ ಆಡುಭಾಷೆ ಅರೆಭಾಷೆ. ಈಗಾಗಲೇ ಈ ಭಾಷೆಯ ಆರೆಂಟು ಕಿರು ಚಿತ್ರಗಳನ್ನು ಕೆಲವಾರು ಕಲಾವಿದರು ತಯಾರಿಸಿ ಯಶಸ್ಸು ಕಂಡಿದ್ದಾರೆ. ಸ್ವತಹ ಸುಧೀರವರೇ " ಗೂಡೆ ಉಕ್ಕಡಲಿ" ಹಾಗೂ " ಕೇಸ್ ಪುಸ್ಕ " ಎಂಬ ಎರಡು ಚಿತ್ರ‌ತಯಾರಿಸಿದ್ದಾರೆ ಹಾಗೂ ಭೇಷ್ ಎನಿಸಿಕೊಂಡಿದ್ದಾರೆ. ಆದರೆ ಈಗಿನ ಪಯಣ ಆ ರೀತಿಯದಲ್ಲ. ಚಿತ್ರ ಮಂದಿರಗಳಲ್ಲಿ ದೊಡ್ಡ ತೆರೆಯ ಮೂಲಕ ಕಾಣಹೊರಟ ಚಿತ್ರವಿದು. ಚಿತ್ರವೊಂದರ ತಯಾರಿಕೆಯೆಂದರೆ ಅದು ಸಾಮಾನ್ಯವಲ್ಲ. ಅಂತಹದೊಂದು ಸಾಹಸಕ್ಕೆ ಇಳಿದಿದ್ದಾರೆ.
ಇಲ್ಲಿ ನಮ್ಮ ತುಳುನಾಡಿನ ಭಾಷೆ ತುಳು ಚಿತ್ರಗಳ ಪ್ರಾರಂಬಿಕ ದಿನಗಳು ನೆನಪಾಗುತ್ತಿದೆ. ಎಪ್ಪತ್ತನೇ ಇಸವಿಯ ಪ್ರಾರಂಭದ ದಿನಗಳಿರಬಹುದು. ಕೆ ಎನ್ ಟೈಲರ್ಂತಹ ಕಲಾವಿದರ ಕಾಲ. " ಎನ್ನ ತಂಗಡಿ" " ದಾರೆದ ಬುಡೆತಿ " ಮುಂತಾದ ಚಿತ್ರಗಳು ಪ್ರಾರಂಭಿಕ ಸವಾಲುಗಳೊಂದಿಗೆ ಶುರುವಾದದ್ದು ನಂತರ "ಕೋಟಿ ಚೆನ್ನಯ" ಎಂಬ ಈ ಮಣ್ಣಿನ ವೀರರ ಕತೆಯ ಸಿನೆಮಾದೊಂದಿಗೆ ಅಪಾರ ಮನ್ನಣೆ ಗಳಿಸಿದ್ದು ಇಂದಿಗೆ ಇತಿಹಾಸ. ಸುದೀರ್ಘ ಐವತ್ತು ವರ್ಷಗಳ ನಂತರ ಈ ಮಣ್ಣಿನ ಸೊಗಡಿನ ಮತ್ತೊಂದು ಭಾಷೆ ಅರೆಭಾಷೆಯಲ್ಲಿ ಈ ಮಣ್ಣಿನ ಮಕ್ಕಳ ಸಾಹಸ ಕತೆಯೊಂದು ಸಿನೆಮಾವಾಗಿ ತೆರೆಯೇರುವುದಕ್ಕೆ ಅಮರಸುಳ್ಯ ಹೋರಾಟದ ಪ್ರಾರಂಭಿಕ ಸ್ಥಳವಾದ ಉಬರಡ್ಕದ ಮಿತ್ತೂರು ನಾಯರ ದೈವಸ್ಥಾನದ ಪೂಜೆಯ ನಂತರ ಪೋಸ್ಟರ್ ಬಿಡುಗಡೆ ಮಾಡಿರುತ್ತಾರೆ. ಇತಿಹಾಸದ ದೀರ್ಘ ಪಯಣದಲ್ಲಿ ಜನಮಾನಸದಿಂದ ಮರೆಯಾಗುತ್ತಿದ್ದ ಆ ಮಹಾ ಘಟನೆಯೊಂದನ್ನು ಮುನ್ನೆಲೆಗೆ ತರುವ ಪ್ರಯತ್ನ. ಭಾರತದ ಸ್ವಾತಂತ್ರ್ಯೋತ್ಸವದ ಎಪ್ಪತೈದು ವರ್ಷಗಳ ಸಂಭ್ರಮದ ಈ ದಿನಗಳಲ್ಲಿ ಇದಾಗುತ್ತಿರುವುದು ಶ್ಲಾಘನೀಯ.
ಹೌದು, ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ಕರೆಯಲ್ಪಡುವ 1857 ರ ಹೋರಾಟಕ್ಕೂ ಇಪ್ಪತ್ತು ವರ್ಷಗಳ ಮೊದಲೇ ಸೂರ್ಯ ಮುಳುಗದ ನಾಡಿನ ದೊರೆಗಳ ರಾಣಿಯ ಅಸ್ಥಿತ್ವವನ್ನೇ ಅಲುಗಾಡಿದಂತೆ ಮಾಡಿ ಹದಿಮೂರು ದಿನಗಳ ಕಾಲ ಈ ನಾಡಿನ್ನಾಳಿದ ನಮ್ಮ ಸಮಸ್ಥ ಹಿರಿಯರಿಗೆ ಈ ಚಿತ್ರ ಸಲ್ಲಿಸುತ್ತಿರುವ ಗೌರವವೆಂದು ನನ್ನ ಭಾವನೆ. ಚಿತ್ರ ತಂಡಕ್ಕೆ ಮತ್ತೊಮ್ಮೆ ಶುಭಹಾರೈಕೆಗಳು.

17/06/2022
https://youtu.be/HdCEO1pGlbwಅರೆಭಾಸೆ ಕಿರುಚಿತ್ರ *ಹೊಸ ಮೊದುಮಕ್ಕ & ಜೋಸ್ತಿಗ* ಟ್ರೇಲರ್ ಬಿಡುಗಡೆಯಾಗುಟು.ಎಲ್ಲವೂ ನೋಡಿ ... ಶೇರ್ ಮಾಡಿ.....
17/06/2022

https://youtu.be/HdCEO1pGlbw

ಅರೆಭಾಸೆ ಕಿರುಚಿತ್ರ *ಹೊಸ ಮೊದುಮಕ್ಕ & ಜೋಸ್ತಿಗ* ಟ್ರೇಲರ್ ಬಿಡುಗಡೆಯಾಗುಟು.
ಎಲ್ಲವೂ ನೋಡಿ ... ಶೇರ್ ಮಾಡಿ.. ಇಷ್ಟಾದರೆ ಲೈಕ್ ಮಾಡಿ..🥰

20/04/2022

♥️ಅರೆಭಾಷೆ ಕಿರುಚಿತ್ರ♥️

"ಹೊಸ ಮೊದುಮಕ್ಕ ಮತ್ತೆ ಜೋಸ್ತಿಗ"

"ರಮ್ಯಶ್ರೀ ನಡುಮನೆ"

ಶುಭವಾಗಲಿ ತಂಡಕ್ಕೆ 💐

"ಕೇಸ್ ಪುಸ್ಕ "
08/04/2022

"ಕೇಸ್ ಪುಸ್ಕ "

ಭಾಷೆಗೊಂದು ಕಲೆಕಲೆಗೊಂದು ದುಡಿಮೆದುಡಿಮೆಗೊಂದು ಹಾರೈಕೆನಿಮ್ಮ ಹಾರೈಕೆಯೆ ನಮ್ಮ ತಂಡದ ಶ್ರೀರಕ್ಷೆಪ್ರೋತ್ಸಾಹವೆ ಯಶಸ್ವಿನ ಗುಟ್ಟುಯಶಸ್ಸೇ.. ಭಾಷಾ ...
01/04/2022

ಭಾಷೆಗೊಂದು ಕಲೆ
ಕಲೆಗೊಂದು ದುಡಿಮೆ
ದುಡಿಮೆಗೊಂದು ಹಾರೈಕೆ
ನಿಮ್ಮ ಹಾರೈಕೆಯೆ ನಮ್ಮ ತಂಡದ ಶ್ರೀರಕ್ಷೆ
ಪ್ರೋತ್ಸಾಹವೆ ಯಶಸ್ವಿನ ಗುಟ್ಟು

ಯಶಸ್ಸೇ.. ಭಾಷಾ ಶ್ರೀಮಂತಿಕೆಯ...
ಎದೆಯಂತರಾಳದ ಹೆಮ್ಮೆ
♥️♥️♥️♥️♥️♥️♥️♥️
"ಕಲಾಮಾಯೆ

ಕಲಾಮಾಯೆ ಸಂಸ್ಥೆಯ ಸಾರತ್ಯದಲ್ಲಿ ನಿರ್ಮಾಣಗೊಂಡ   "ಕೇಸ್ ಪುಸ್ಕ" ಅರೆಭಾಷೆ ಸಿನಿಮಾ ಇಂದು ಗುತ್ತಿಗಾರಿನ ಸ. ಪ. ಪೂ. ಕಾಲೇಜು ಮೈದಾನದಲ್ಲಿ ಯಶಸ್ವ...
20/03/2022

ಕಲಾಮಾಯೆ ಸಂಸ್ಥೆಯ ಸಾರತ್ಯದಲ್ಲಿ ನಿರ್ಮಾಣಗೊಂಡ "ಕೇಸ್ ಪುಸ್ಕ" ಅರೆಭಾಷೆ ಸಿನಿಮಾ ಇಂದು ಗುತ್ತಿಗಾರಿನ ಸ. ಪ. ಪೂ. ಕಾಲೇಜು ಮೈದಾನದಲ್ಲಿ ಯಶಸ್ವಿ ಪ್ರದರ್ಶನ ನಡೆಯಿತು. ಆಬಾರಿಯಾಗಿದ್ದೇವೆ ಗುತ್ತಿಗಾರಿನ ಮಹಾ ಜನತೆಗೆ 🙏
ಸಹಕರಿಸಿದ ಸಮಸ್ತ ಕಲಾಭಿಮಾನಿಗಳಿಗೆ ಅಭಿನಂದನೆಗಳು 💐ಶುಭವಂದನೆಗಳು.. ಕೇಸ್ ಪುಸ್ಕ ಚಿತ್ರತಂಡ

ಅರೆಭಾಷೆ ಕಲಾ ಕ್ಷೇತ್ರದಲ್ಲೊಂದು ವಿನನೂತನ ಪ್ರಯತ್ನK A L A M A Y E
15/03/2022

ಅರೆಭಾಷೆ ಕಲಾ ಕ್ಷೇತ್ರದಲ್ಲೊಂದು ವಿನನೂತನ ಪ್ರಯತ್ನ
K A L A M A Y E

13/03/2022

Address

Sullia D K

Website

Alerts

Be the first to know and let us send you an email when ಅರೆಭಾಷೆ ಚಿತ್ರರಂಗ Arebashe film industry posts news and promotions. Your email address will not be used for any other purpose, and you can unsubscribe at any time.

Share