08/10/2023
ಮಿಂಚುಹುಳು ಲ್ಯಾಂಪಿರಿಡೆ ಎಂಬ ಕೀಟಗಳ, ಕೊಲಿಯೋಪ್ಟೆರ ಕುಟುಂಬಕ್ಕೆ ಸೇರುತ್ತದೆ.ಇವುಗಳು ರೆಕ್ಕೆಯುಳ್ಳ ಜೀರುಂಡೆಗಳು, ಇವುಗಳನ್ನು ಸಾಮಾನ್ಯವಾಗಿ ಮಿಂಚುಹುಳು ಅಥವಾ ಮಿಂಚು ದೋಷಗಳು ಎಂದು ಕರೆಯಲಾಗುತ್ತದೆ. ಮಿಂಚುಹುಳು ತಮ್ಮಿಂದ ಉಂಟಾಗುವ ಬೆಳಕನ್ನು ಸಂಗಾತಿಯನ್ನು ಸೆಳೆಯಲು ಅಥವಾ ಬೇಟೆಯನ್ನು ಹಿಡಿಯಲು ಬಳಸುತ್ತವೆ. ಮಿಂಚು ಹುಳುಗಳು ತಣ್ಣನೆಯ ಬೆಳಕು ಉತ್ಪತ್ತಿ ಮಾಡುತ್ತವೆ,ಈ ಬೆಳಕು ಯಾವುದೇ ಅತಿಗೆಂಪು ಅಥವಾ ನೇರಳಾತೀತ ಆವರ್ತನಗಳಲ್ಲಿ ಇರುವುದ್ದಿಲ್ಲ, ರಾಸಾಯನಿಕವಾಗಿ ತಮ್ಮ ಹೊಟ್ಟೆಯ ಕೆಳಭಾಗದಿಂದ ಉತ್ಪತ್ತಿಯಾಗುವ ಬೆಳಕು ಹಳದಿ,ಹಸಿರು ಅಥವಾ ತಿಳಿಗೆಂಪಾಗಿರುತ್ತದೆ,ಹಾಗು ಇವು ೫೧೦ ರಿಂದ ೬೭೦ ನ್ಯಾನೋಮೀಟರ್ ತರಂಗಾಂತರವನ್ನು ಹೊಂದಿರುತ್ತವೆ.ಸುಮಾರು ೨೦೦೦ ಜಾತಿಯ ಮಿಂಚುಹುಳುಗಳು ಸಮಶೀತೋಷ್ಣ ಮತ್ತು ಉಷ್ಣವಲಯದಲ್ಲಿ ಕಂಡುಬರುತ್ತವೆ.