19/10/2024
*೧೯೯೫ ರ ಡಿಡಿಎಲ್ ಜೆ* ನೆನಪು✒️
ಆಗಿನ್ನೂ ನಮ್ಮ ತಂದೆ ಆಪರೇಟರ್, ಈ ಚಿತ್ರ ಬಹುಶಃ ನಮ್ಮ ಮಳವಳ್ಳಿಯ ಮಹಾಲಕ್ಷ್ಮಿ ಥಿಯೇಟರ್ ನಲ್ಲಿ ನಾ ನೋಡಿದ ಎರಡನೇ ಹಿಂದಿ ಚಿತ್ರ, ಹಾಗೂ ನಮ್ಮ ಥಿಯೇಟರ್ ನಲ್ಲಿ ಸ್ಕ್ರೀನಿಂಗ್ ಆದ ೨ ನೇ ಹಿಂದಿ ಚಿತ್ರ ಸಹ ಇದೇನೇ ಅನ್ಸುತ್ತೆ, ಆಗೆಲ್ಲ ಬೇರೆ ಭಾಷೆ ಚಿತ್ರ ನೋಡಬೇಕು ಅಂದ್ರೆ ಅದೇ ಚಿತ್ರಮಂದಿರದ ಪಕ್ಕದಲ್ಲಿ ಇದ್ದ ಮಹಾವೀರ ಟೆಂಟ್ ನಲ್ಲಿ ನೋಡ್ತಿದ್ವೀ, ಶಾರುಖ್ ನ ಡರ್, ಬಾಜೀಗರ್, ರಾಮ್ ಜಾನೆ, ಕರನ್ ಅರ್ಜುನ್ ಅದೇ ಟೆಂಟ್ ನಲ್ಲಿ ನೋಡಿದ್ದು, ಆದರೆ ಶಾರುಖ್ ಖಾನ್ ಈ ಡಿಡಿಎಲ್ ಜೆ ಮಾತ್ರ ನಮ್ಮ ಮಹಾಲಕ್ಷ್ಮಿ ಥಿಯೇಟರ್ ನಲ್ಲಿ ಸ್ಕ್ರೀನಿಂಗ್ ಆಗಿತ್ತು, ಆ ದೊಡ್ಡ ಥಿಯೇಟರ್ ನಲ್ಲಿ ಹಿಂದಿ ಸಿನಿಮಾ ನೋಡೋ ಮಜಾನೆ ಬೇರೆ ಬಿಡಿ......
ಆಗೆಲ್ಲಾ ಹಿಂದಿ ಸಿನಿಮಾ ಕ್ರೇಜ್ ಬೇರೆನೆ ಇತ್ತು ನಮ್ಮಲ್ಲಿ, ಎಂತೆಂಥ ಸಿನಿಮಾ ಅಬ್ಬಾ ಹಾಡುಗಳು ಅಷ್ಟೇ, ಅರ್ಥ ಪೂರ್ಣ, ಡಿಡಿಎಲ್ ಜೆ ಅಂತು ಸೂಪರ್ಬ್ ಸಾಂಗ್ಸ್, ಆಗೆಲ್ಲಾ ಕ್ಯಾಸೆಟ್ ಕಾಲ ಎಚ್.ಎಮ್.ವಿ ಅಂತ ಕಂಪನಿ ಈ ಚಿತ್ರದ ಆಡಿಯೋ ಮಾರುಕಟ್ಟೆ ತಂದವರು, ನಮ್ಮ ತಂದೆ ಇಷ್ಟ ಪಟ್ಟು ತರಿಸಿಕೊಂಡಿದ್ದರು, ಅದರ ಜೊತೆಗೆ ಹಮ್ ಆಪ್ಕೆ ಹೈ ಕೌನ್ ಬಿ ಸೈಡ್ ಕಾಂಬೋ ಹಬ್ಬ ಅನ್ನಿ,
ಹಾಡುಗಳು, ಕ್ಯಾಸೆಟ್, ಮೌಲ್ಯ ಗೊತ್ತಿರೋದು ೮೦,೯೦ ಸ್ ಬ್ಯಾಚ್ ಗೆ ಮಾತ್ರ ಏನಂತೀರಿ, ?
ಡಿಡಿಎಲ್ ಜೆ ಒಂದೊಂದು ಹಾಡು ಒಂದೊಂದು ಮುತ್ತು, ಸಿನಿಮಾ ಅಂತು ರೆಕಾರ್ಡ್ ನೋಡಿ ಸಾಕು ಹೇಳಬೇಕಿಲ್ಲ,
ಇರಲಿ ಇಂದಿಗೆ *ಡಿಡಿಎಲ್ ಜೆಗೆ* ೨೯ ವರ್ಷ ಈ ಚಿತ್ರ ನಮಗೆ ನೀಡಿದ
ಸಿನಿಮಾ ನಿರ್ದೇಶಕ ಆದಿತ್ಯ ಚೋಪ್ರಾ, ಯಶ್ ರಾಜ್ ನಿರ್ಮಾಣ ಸಂಸ್ಥೆ, ಜತಿನ್-ಲಲಿತ್ ಸಂಗೀತ, ಶಾರುಖ್, ಕಾಜೋಲ್ , ಅಂಬರೀಶ್ ಪುರಿ ನಟನೆ ವಿಭಾಗ, ಎಂಟೈರ್ ಆ ಚಿತ್ರದ ಸಿಬ್ಬಂದಿ ಗಳಿಗೆ ನನ್ನ ಅನಂತ ನಮನಗಳು🙏🏻
Thank u Yash Raj sir for the most iconic all time memorable musical hit movie like *DDLJ*🫰🏻💛❤️